Loading Events

ಅಂತರಾಷ್ಟ್ರೀಯ ಜಿನ ಸಮ್ಮಿಲನ ದುಬೈ

December 3 @ 5:00 pm - December 4 @ 8:00 pm +04

ಜೈ ಜಿನೇಂದ್ರ

*ಜಿನಸಮ್ಮಿಲನ* ಎಂಬ ಶಬ್ಧವು ಕಿವಿಗಳಿಗೆ ಬಿದ್ದಾಗ ಅದೇನೊ… ಹೊಸ ಲವಲವಿಕೆಯ ನವ ಚೈತನ್ಯದ ಯುವ ಜೈನ ಸಮಾಜ ಚಟುವಟಿಕೆಯ ಸಂಭ್ರಮದ ಅಂಗಣ ನೆನಪಾಗುತ್ತದೆ
ಹೌದು ಬಂಧುಗಳೇ…. ಕಳೆದ ಹಲವಾರು ವರ್ಷಗಳಿಂದ ಬೆಂಗಳೂರಿನ ಸುಹಾಸ್ತಿ ಯುವ ಜೈನ್ ಮಿಲನ್ ಅಯೋಜಕತ್ವದಲ್ಲಿ ನಡೆಯುತ್ತಿರುವ ಯುವ ಜೈನ ಸಮಾಜವು ಒಂದುಗೂಡಿಸುವ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮಗಳ ಒಟ್ಟು ಕಾರ್ಯಕ್ರಮ ಈ ಜಿನಸಮ್ಮಿಲನ.
ಮೊದಲ ಕೆಲವು ವರ್ಷ ಸ್ಥಳೀಯವಾಗಿ ನಡೆದು ಮುಂದೆ ರಾಜ್ಯ ಮಟ್ಟದ ಕಾರ್ಯಕ್ರಮವಾಗಿ ರೂಪುಗೊಂಡಿತು ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಆನ್ಲೈನ್ ಮೂಲಕ ನಡೆದು ತನ್ನದೇ ಆದ ಛಾಪನ್ನು ಮೂಡಿಸಿದೆ. ಕಳೆದ ಎರಡು ವರ್ಷಗಳಿಂದ ವಿದೇಶದಲ್ಲಿರುವ ಕನ್ನಡ ಜೈನ ಬಂಧು ಸಹಯೋಗದೊಂದಿಗೆ ಶ್ರೀಕ್ಷೇತ್ರ ಹೊಂಬುಜ ಜೈನಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ರಾಜರ್ಷಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡು ವಿಶ್ವಸ್ಥರದಲ್ಲಿ ಆನ್ಲೈನ್ ಮೂಲಕ ಈ ಜಿನ ಸಮ್ಮಿಲನ ಕಾರ್ಯಕ್ರಮ ನಡೆದಿರುವುದುˌ ಇತಿಹಾಸ….

ಪ್ರಸ್ತುತ ವರ್ಷದಲ್ಲಿ ಈ ಜಿನಸಮ್ಮಿಲನ ಕಾರ್ಯಕ್ರಮವು ನೀಲಿಕಡಲಾಚೆಯ ದುಬೈ ದೇಶದಲ್ಲಿ ದುಬೈ ಜೈನ್ ಮಿಲನ್ ಇವರ ಆತಿಥ್ಯದಲ್ಲಿ ಬಹು ವಿಜೃಂಭಣೆಯಿಂದ ಹಲವು ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಈ ಸಂಭ್ರಮದ ಕಾರ್ಯಕ್ರಮಕ್ಕಾಗಿ ಕನ್ನಡ ನಾಡಿನ ಹಲವಾರು ಗಣ್ಯಮಾನ್ಯರು ತೆರಳಿ *ಅಂತರಾಷ್ಟ್ರೀಯ ಜಿನಸಮ್ಮಿಲನˌ ದುಬೈ* ಎಂಬ ಸುವರ್ಣ ಪುಷ್ಪಕ್ಕೆ ಸುಗಂಧ ಪರಿಮಳ ಬೀರಲಿದ್ದಾರೆ
ಈ ಸಂಭ್ರಮದ ಕಾರ್ಯಕ್ರಮಕ್ಕೆ ಎಲ್ಲಾ ಬಂಧುಗಳನ್ನು ಅಯೋಜಕ ಬಳಗವು ಅತ್ಯಂತ ಪ್ರೀತಿಪೂರ್ವಕವಾಗಿ ದುಬೈ ದೇಶಕ್ಕೆ ಸ್ವಾಗತಿಸುತ್ತಿದೆ ಈ ವಿಶೇಷ ದುಬೈ ಪ್ರವಾಸ ಕಾರ್ಯಕ್ರಮದಲ್ಲಿ ಜಿನಸಮ್ಮಿಲನ ಕಾರ್ಯಕ್ರಮ ಅಲ್ಲದೆ ದುಬೈ ದೇಶದ ವಿಶೇಷವಾದ ಮರಳು ಗಾಡಿನಲ್ಲಿ ವಿಹಾರ ( Desart Safar)i, miracle Graden ˌ Museam of the future, ಪ್ರಪಂಚದ ಅತ್ಯದ್ಬುತ ಕಟ್ಟಡ (2734 ಆಡಿ ) Burj Kalifa ಕ್ಕೆ ತೆರಳಿ ವೀಕ್ಷಣೆ ಸೇರಿದಂತೆ ಹತ್ತು ಹಲವು ದುಬೈ ಪ್ರವಾಸಿ ತಾಣಗಳ ವೀಕ್ಷಣೆಯ ಸವಿಯು ಎಲ್ಲರಿಗೂ ದೊರಕಲಿದೆ ಈ ಸಮಾರಂಭದಲ್ಲಿ ಎಲ್ಲಾ ಸಹೃದಯಿ ಬಂಧುಗಳೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ವಿನಂತಿ

✍️ ಮಹಾವೀರ ಪ್ರಸಾದ್ ಹೊರನಾಡು

Share This Event

  • This event has passed.

Details

Start:
December 3 @ 5:00 pm +04
End:
December 4 @ 8:00 pm +04
Event Category:
Website:
https://www.facebook.com/events/5459440647441503

Venue

Jss Private School, Al Safa, Dubai
Near Gulf News, Dubai
Dubai,United Arab Emirates
+ Google Map

To Top